ಜಪಾನಿನ ಭಾಷೆ (日本語 / にほんご - ನಿಹೊಂಗೊ ) ಪ್ರಮುಖವಾಗಿ ಜಪಾನ್ ದೇಶದಲ್ಲಿ ಮಾತನಾಡಲ್ಪಡುವ ಒಂದು ಪ್ರತ್ಯೇಕಗೊಂಡ ಭಾಷೆ. ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾದ ಇದನ್ನು ಸುಮಾರು ೧೩೦ ಮಿಲಿಯನ್ ಜನ ಉಪಯೋಗಿಸುತ್ತಾರೆ. ಇದು ಪ್ರಪಂಚದ ೯ನೇ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಇದು ಜಪಾನ್ ದೇಶದ ಅಧಿಕೃತ ಭಾಷೆಯಾಗಿದೆ. == ಭೌಗೋಳಿಕ ಹಂಚಿಕೆ == ಜಪಾನ್ ದೇಶದಲ್ಲಿ ಬಹುತೇಕವಾಗಿ ಜಪಾನ್ ಭಾಷೆಯಲ್ಲಿ ಮಾತನಾಡುತ್ತಾರೆ. ಅಲ್ಲದೇ ಇದನ್ನು ಜಪಾನ್ ದೇಶದ ಹೊರಗೂ ಸಹ ಮಾತನಾಡುತ್ತಾರೆ. ಎರಡನೇ ಪ್ರಪಂಚ ಮಹಾಯುದ್ಧದ ಸಮಯದಲ್ಲಿ ಜಪಾನ್ ವಶಪಡಿಸಿಕೊಂಡ ತೈವಾನ್ ಮತ್ತು [[ಕೊರಿಯಾ]] ದೇಶದ ಭಾಗಗಳಲ್ಲಿ, ಚೀನಾ, ಫಿಲಿಪ್ಪೀನ್ಸ್ ಮತ್ತು ವಿವಿಧ ಪೆಸಿಫಿಕ್ ದ್ವೀಪಗಳಲ್ಲಿ ಜಪಾನ್ ಭಾಷೆಯನ್ನು ರಾಜ್ಯಭಾಷೆಯಾಗಿ ಕಲಿಯಲಾಗುತ್ತಿತ್ತು. ಪರಿಣಾಮವಾಗಿ, ಈ ದೇಶಗಳಲ್ಲಿನ ಹಲವು ಹಿರಿಯ ಜನರು ಈಗಲೂ ಜಪಾನಿ ಭಾಷೆಯನ್ನು ಮಾತನಾಡುತ್ತಾರೆ. == ಉಲ್ಲೇಖಗಳು ==